ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಖರ್ಗೆ ಅವರು ತಮ್ಮ ತವರು ಜಿಲ್ಲೆಯಲ್ಲಿ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. ನನಗೆ ಕಳೆದ ಬಾರಿ ಸೋಲಾಯ್ತು ಆಗಲಿ. ಸೋಲಾದ್ರು ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಸ್ಥಾನವೇ ಸಿಕ್ಕಿದೆ. ನಿಮ್ಮ ವೋಟು ನನಗೆ ತಪ್ಪಿದ್ರೆ ನಿಮ್ಮ ಹೃದಯ ಗೆಲ್ಲೋದಕ್ಕೆ ನನಗೆ ಸಾಧ್ಯ ಆಗಲಿಲ್ಲ ಅಂತ ತಿಳಿದುಕೊಳ್ಳತ್ತೇನೆ. ಮತ ಹಾಕೋಕೆ ಬರದೆ ಇದ್ರೂ ಕೂಡ ನಾನು ಸತ್ತ ಮೇಲೆ ಮಣ್ಣಿಗೆ ಬರಬೇಕು ನೀವು. ನಾವು ಸತ್ರೆ ನಮ್ಮ ಕೆಲಸ ನೆನೆಸಿಕೊಂಡು ಮಣ್ಣು ಹಾಕೋಕೆ ಬನ್ನಿ. ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ, ಹೂಳಿದ್ರೆ ಮಣ್ಣು ಹಾಕೋಕೆ ಬನ್ನಿ. ಆಗ ನೋಡಪ್ಪ ಆತನ ಮಣ್ಣಿಗೆ ಎಷ್ಟು ಜನ ಬಂದ್ರು ಅಂತಾನಾದ್ರು ಹೇಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಭಾವನಾತ್ಮಕವಾದ ಭಾಷಣ ಮಾಡಿದ್ದಾರೆ. ರಾಜ್ಯಕ್ಕೆ ಮೋದಿ ಬರ್ತಾರೆ ಹೋಗ್ತಾರೆ. ಆದ್ರೆ ನಾವಂತೂ ಸದಾ ನಿಮ್ಮ ಕೆಲಸ ಮಾಡಲು ಇದ್ದೇವೆ. ದುರ್ದೈವದಿಂದ ಹಿಂದೆ ಆಗಿದ್ದು ಆಗಿದೆ. ಕಳೆದ ಬಾರಿಯ ಸೋಲನ್ನು ನಾವು ಮರೆತು ಬಿಡೋಣ. ಈ ಬಾರಿ ಬಿಜೆಪಿಗೆ ಮುಖಭಂಗ ಮಾಡಬೇಕು. ಮೋದಿಗೂ ಗೊತ್ತಾಗಲಿ ಅವರ ಕೊಡುಗೆ ಏನೂ ಅಂತ. ನಾವು ಹಾಕಿರುವ ಹಳಿ ಮೇಲೆ ಒಂದೆರಡು ಟ್ರೇನ್ ಬಿಟ್ಟು ಹಸಿರು ಛಂಡಾ ತೋರಿಸಿದ್ದಾರೆ. ನಾವು ಸಾಕಷ್ಟು ಯೋಜನೆಗಳನ್ನ ತಂದಿದ್ದೇವೆ. ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದೇವೆ. ಮೋದಿ ಏನೂ ಮಾಡದೇ ದೇಶಕ್ಕಾಗಿ ಬಹಳಷ್ಟು ಮಾಡಿದ್ದೇವೆ ಅಂತಾರೆ. ಈ ದೇಶದಲ್ಲಿ ಇಬ್ಬರು ಮಾರಾಟ ಮಾಡೋರು ಇದ್ದಾರೆ. ಖರೀದಿ ಮಾಡೋರು ಇಬ್ಬರು ಇದ್ದಾರೆ. ಮೋದಿ, ಅಮಿತ್ ಶಾ ಮಾರಾಟ ಮಾಡೋರು. ಅದಾನಿ ಮತ್ತು ಅಂಬಾನಿ ಖರೀದಿ ಮಾಡೋರು ಎಂದು ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಮತ ಹಾಕೋಕೆ ಬರದೆ ಇದ್ರೂ ನಾನು ಸತ್ತ ಮೇಲೆ ಮಣ್ಣಿಗೆ ಬರಬೇಕು; ಮಲ್ಲಿಕಾರ್ಜುನ ಖರ್ಗೆ ಭಾವನಾತ್ಮಕ ಮಾತು
No Ads
Log in to write reviews