ಮನೆಯ ಪುಟ್ಟಲಕ್ಷ್ಮಿಗೆ ಮುದ್ದಾದ ಹೆಸರನ್ನೇ ನೇಹಾ ದಂಪತಿ ನಾಮಕರಣ ಮಾಡಿದ್ದಾರೆ. ಮಗಳಿಗೆ ‘ಶಾರದ’ ಎಂದು ಹೆಸರಿಟ್ಟಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಿರುತೆರೆ ನಟ- ನಟಿಯರು ಭಾಗಿಯಾಗಿ ನೇಹಾ ಮಗಳಿಗೆ ಶುಭಕೋರಿದ್ದಾರೆ.
ಇನ್ನೂ ಈಗೀನ ಟ್ರೆಂಡ್‌ನೆಲ್ಲಾ ಪಕ್ಕಕ್ಕಿಟ್ಟು ಮಗಳಿಗೆ ಶಾರದ ಮಾತೆಯ ಹೆಸರನ್ನಿಟ್ಟಿದ್ದಾರೆ. ಪುತ್ರಿಗೆ ‘ಶಾರದ’ (Sharada) ಎಂದು ನೇಹಾ ದಂಪತಿ ನಾಮಕರಣ ಮಾಡಿದ್ದಾರೆ. ಮಗಳಿಗೆ ಅರ್ಥಪೂರ್ಣವಾಗಿ ಹೆಸರನ್ನು ಇಟ್ಟಿದಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಎಲ್ಲರೂ ತಮ್ಮ ಮಗುವಿಗೆ ನಾಮಕರಣ ಮಾಡುವಾಗ ಫ್ಯಾನ್ಸಿ ಹೆಸರನ್ನು ಹುಡಕಲು ಬಯಸುತ್ತಾರೆ. ಎಲ್ಲೂ ಕೇಳಿರದ ಹೆಸರುಗಳನ್ನು ಇಡಲು ಆದ್ಯತೆ ನೀಡುತ್ತಾರೆ. ಈಗ ನೇಹಾ ಗೌಡ ಅವರು ತುಂಬಾನೇ ಸಾಂಪ್ರದಾಯಿಕ ಹೆಸರಿಟ್ಟು ಗಮನ ಸೆಳೆದಿದ್ದಾರೆ.
ಶಾರದೆ ಎಂಬುದು ವಿದ್ಯಾ ದೇವತೆಯ ಹೆಸರು. ಅವರು ಈ ಹೆಸರನ್ನು ಇಟ್ಟಿದ್ದಕ್ಕೆ ಅನೇಕರು ಖುಷಿಪಟ್ಟಿದ್ದಾರೆ. ‘ಹೆಸರು ಸಾಂಪ್ರದಾಯಿಕವಾಗಿದೆ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ನೇಹಾ ಮತ್ತು ಚಂದನ್ (Chandan Gowda) ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಆ ಸ್ನೇಹವೇ ಪ್ರೀತಿಗೆ ತಿರುಗಿ ಮದುವೆಗೆ ಮುನ್ನುಡಿ ಬರೆದರು. ಗುರುಹಿರಿಯರ ಒಪ್ಪಿಗೆಯ ಮೇರೆಗೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇನ್ನೂ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ಪ್ರಸ್ತುತ ಮಗಳ ಆರೈಕೆಯಲ್ಲಿ ನೇಹಾ ತೊಡಗಿಸಿಕೊಂಡಿದ್ದಾರೆ. ನಟನೆಯಿಂದ ಅವರು ಅಂತರ ಕಾಯ್ದುಕೊಂಡಿದ್ದಾರೆ.
Log in to write reviews