ಸ್ಯಾಂಡಲ್‌ವುಡ್‌ಗೆ ಕಮ್ಬ್ಯಾಕ್ ಮಾಡಿದ ನಟಿ ಮಯೂರಿ ಸ್ಯಾಂಡಲ್‌ವುಡ್‌ಗೆ 'ಕೃಷ್ಣ ಲೀಲಾ' ಸಿನಿಮಾದ ಮೂಲಕ ಎಂಟ್ರಿ ಕೊಟ್ಟಿದ್ದ ನಟಿ ಮಯೂರಿ ಕ್ಯಾತರಿ ಅವರು, ಈಗ ಸಣ್ಣ ಬ್ರೇಕ್ ನಂತರ ಹೊಸ ಚಿತ್ರವೊಂದರ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಹೊಸ ಸಿನಿಮಾಕ್ಕಾಗಿಯೇ ಅವರು ಹೊಸದಾಗಿ ಫೋಟೋಶೂಟ್ ಮಾಡಿಸಿ, ಸಿನಿಪ್ರಿಯರ ಗಮನ ಸೆಳೆದಿದ್ದಾರೆ.ಮದುವೆ, ಮಗುವಾದ ನಂತರ ಬಣ್ಣ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಸ್ಯಾಂಡಲ್‌ವುಡ್ ನಟಿ ಮಯೂರಿ ಕ್ಯಾತರಿ, ಕಳೆದ ವರ್ಷ 'ಬಿಗ್ ಬಾಸ್ ಕನ್ನಡ' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಧಾರಾವಾಹಿಯೊಂದರಲ್ಲಿ ಅತಿಥಿ ಪಾತ್ರದಲ್ಲೂ ಸಹ ಅಭಿನಯಿಸಿದ್ದರು. ಈಗ ಅವರು ಪೂರ್ಣ ಪ್ರಮಾಣದಲ್ಲಿ ಸಿನಿಮಾದಲ್ಲಿ ಗುರುತಿಸಿಕೊಳ್ಳಲು ತಯಾರಿ ನಡೆಸಿದ್ದು, ಶೀಘ್ರದಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡುವ ಸಿದ್ಧತೆಯಲ್ಲಿದ್ದಾರೆ. ನಟನೆಗೆ ಕಮ್‌ಬ್ಯಾಕ್ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ ಮಯೂರಿ, "ಮದುವೆ, ಮಗು ಅಂತಾದ ಮೇಲೆ ನಟಿಯರು ಕಮ್‌ಬ್ಯಾಕ್ ಮಾಡುವುದು ಸುಲಭವಲ್ಲ ಎಂಬ ಮಾತಿದೆ. ಆದರೆ ಅದು ಸುಳ್ಳು" ಎಂದಿದ್ದಾರೆ. ಬದಲಾಗಿ ಅವರಿಗೆ ಈಗ ಹಿಂದೆಂದಿಗಿಂತ ಆತ್ಮವಿಶ್ವಾಸ ಹೆಚ್ಚಿದೆಯಂತೆ. ಅದೇ ರೀತಿ ಧಾರಾವಾಹಿ, ಸಿನಿಮಾಗೆ ಸಾಕಷ್ಟು ಅವಕಾಶಗಳು ಅವರನ್ನು ಅರಸಿ ಬರುತ್ತಿದ್ದು, ಸದ್ಯಕ್ಕೆ ಸಿನಿಮಾ ಕಡೆ ಗಮನ ಹರಿಸಿ, ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದಾರೆ.ಮಗುವಾದ ಕೆಲವು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಮರು ಪ್ರವೇಶಿಸುತ್ತಿರುವುದಕ್ಕೆ ಖುಷಿ ಇದೆ. ಯಾವುದೇ ಪಾತ್ರವಾದರೂ ಅದಕ್ಕೆ ನ್ಯಾಯ ಸಲ್ಲಿಸಬಲ್ಲೆ ಎಂಬ ಆತ್ಮವಿಶ್ವಾಸ ಹೆಚ್ಚಿದೆ" ಎಂದು ಹೇಳುತ್ತಾರೆ ಮಯೂರಿ ಕ್ಯಾತರಿ.ಕನ್ನಡ ಕಿರುತೆರೆಯಲ್ಲಿ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ನಟನೆ ಆರಂಭಿಸಿದ್ದ ಮಯೂರಿ ಕ್ಯಾತರಿ, 'ಕೃಷ್ಣ ಲೀಲಾ', 'ಇಷ್ಟಕಾಮ್ಯ', 'ನಟರಾಜ ಸರ್ವಿಸ್', 'ಪೊಗರು', 'ವೀಲ್‌ಚೇರ್ ರೋಮಿಯೋ', 'ರುಸ್ತುಂ', 'ನನ್ನ ಪ್ರಕಾರ' ಸೇರಿದಂತೆ ಹಲವು ಚಿತ್ರಗಳ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಈಗ ಇನ್ನಷ್ಟು ಭಿನ್ನ ಪಾತ್ರಗಳ ಮೂಲಕ ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹೊಸ ಚಿತ್ರವೊಂದರ ಮೂಲಕ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿರುವ ನಟಿ ಮಯೂರಿ, ಅದಕ್ಕಾಗಿಯೇ ಹೊಸ ಫೋಟೋಶೂಟ್ ಮಾಡಿಸಿ, ಎಲ್ಲರ ಗಮನ ಸೆಳೆದಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಕಮ್ಬ್ಯಾಕ್ ಮಾಡಿದ ನಟಿ ಮಯೂರಿ
No Ads
Log in to write reviews