ಡಿಸೆಂಬರ್, 13 : ಪುಷ್ಪ 2 ಚಿತ್ರದ ಸಕ್ಸಸ್ ಸಂಭ್ರಮದಲ್ಲಿದ್ದ ನಟ ಅಲ್ಲು ಅರ್ಜುನ್ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ನಡೆದ ಘಟನೆಗೆ ಸಂಬAಧಿಸಿದAತೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ. ನಟನನ್ನು ಚಿಕ್ಕಡಪಲ್ಲಿ ಠಾಣೆಗೆ ಕರೆದೊಯ್ಯಲಾಗಿದೆ. ಡಿಸೆಂಬರ್ 4ರಂದು ಪುಷ್ಪ 2 ರಿಲೀಸ್ ಆಗಿದ್ದ ಸಂದರ್ಭದಲ್ಲಿ ಸಂಧ್ಯ ಥಿಯೇಟರ್‌ನಲ್ಲಿ ನೂಕುನುಗ್ಗಲು ಉಂಟಾಗಿತ್ತು. ಈ ಮಹಿಳೆ ಮೃತಪಟ್ಟಿದ್ದರು. ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಭೀಕರ ಕಾಲ್ತುಳಿತ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಕೂಡ ಪೊಲೀಸರು ಆರೋಪಿಯನ್ನಾಗಿ ಸೇರಿಸಿದ್ದಾರೆ. ಆದರೆ ಅಲ್ಲು ಅರ್ಜುನ್ ಈಗಾಗಲೇ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ನೆಚ್ಚಿನ ನಟ ಏಕಾಏಕಿ ಅರೆಸ್ಟ್ ಆಗಿದ್ದರಿಂದ ಚಿತ್ರರಂಗದ ಜತೆಗೆ ಅಲ್ಲು ಅರ್ಜುನ್ ಅಭಿಮಾನಿಗಳು ಶಾಕ್‌ನಲ್ಲಿದ್ದಾರೆ
ನಟ ಅಲ್ಲು ಅರ್ಜುನ್ ಅರೆಸ್ಟ್..! ಬಿಗ್ ಶಾಕ್‌ನಲ್ಲಿ ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್..!
No Ads
Log in to write reviews