No Ads

ಒಂದು ಮುತ್ತಿಗೆ 50 ಸಾವಿರ..! ಟೀಚರ್ ಹಿಂದೆ ಹೋದ ಉದ್ಯಮಿಗೆ ಕಾದಿತ್ತು ಬಿಗ್ ಶಾಕ್!

ಕರ್ನಾಟಕ 2025-04-01 15:31:20 183
post

ಬೆಂಗಳೂರಿನ ಉದ್ಯಮಿಯೊಬ್ಬರು ಸುರಸುಂದರಿಯ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಲ್ಲದೇ ಬ್ಲ್ಯಾಕ್ಮೇಲ್ಗೆ ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ

ಬೆಂಗಳೂರಿನ ಉದ್ಯಮಿ ಆ ಸುರಸುಂದರಿಯ ಮುತ್ತಿನ ಬಲೆಯಲ್ಲಿ ಲಾಕ್ ಆಗಿದ್ದಾರಂತೆ. ಆಕೆಯ ಒಂದು ಮುತ್ತಿಗೆ ಉದ್ಯಮಿಯು ಸ್ಪಾಟಲ್ಲೇ 50 ಸಾವಿರ ಹಣವನ್ನು ನೀಡುತ್ತಿದ್ದರಂತೆ!. ನಂತರ ಆಕೆಯ ಜೊತೆ ಉದ್ಯಮಿಯು ಚಾಟಿಂಗ್ ಹಾಗೂ ಡೇಟಿಂಗ್ ನಡೆಸಿದ್ದರಂತೆ. ಈ ವೇಳೆ ಆಕೆ ಉದ್ಯಮಿಯೊಂದಿಗಿನ ಸಲುಗೆಯ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಇಟ್ಟುಕೊಂಡಿದ್ದಳಂತೆ.

ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಶ್ರೀದೇವಿ ಎಂಬಾಕೆ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಾಳೆ. ಆಕೆ ಪ್ರಿಸ್ಕೂಲ್ ನಡೆಸುತ್ತಿದ್ದಳು. ರಾಕೇಶ್ ಎಂಬ ವ್ಯಕ್ತಿಯ ಇಬ್ಬರು ಮಕ್ಕಳು ಅದೇ ಶಾಲೆಯಲ್ಲಿ ಓದುತ್ತಿದ್ದಾರೆ. ಆತ ಆಗಾಗ ತನ್ನ ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಕರೆದುಕೊಂಡು ಬರಲು ಶಾಲೆಗೆ ಹೋಗುತ್ತಿದ್ದಂತೆ, ಶ್ರೀದೇವಿಯೊಂದಿಗೆ ಪರಿಚಯ ಬೆಳೆಯಿತು.

ಇದೇ ಪರಿಚಯದ ನಂತರ ಸ್ನೇಹಕ್ಕೆ ತಿರುಗಿ, ಡೇಟಿಂಗ್ ಹಂತಕ್ಕೂ ತಲುಪಿತು. ರಾಕೇಶ್‌ರನ್ನು ತನ್ನ ಬುಟ್ಟಿಗೆ ಹಾಕಿಕೊಂಡ ಶ್ರೀದೇವಿ ಒಂದು ಮುತ್ತಿಗೆ 50 ಸಾವಿರ ರೂ. ಪಡೆಯುತ್ತಿದ್ದಳು. ಅಲ್ಲದೆ, ಅದರ ಫೋಟೋ ತೆಗೆದುಕೊಂಡು ಇಟ್ಟುಕೊಳ್ಳುತ್ತಿದ್ದಳು. ಇದರ ನಡುವೆ ಆಕೆ ರಾಕೇಶ್‌ನ ಬಳಿ 2 ಲಕ್ಷ ರೂ. ಸಾಲ ಕೇಳಿದ್ದಳು. ಉದ್ಯಮಿಯಾಗಿದ್ದ ರಾಕೇಶ್ ಹಣ ಕೊಡುವುದಾಗಿ ಭರವಸೆ ನೀಡಿದ್ದ. ಅಲ್ಲದೆ, ಹಣವನ್ನು ಸಹ ಕೊಟ್ಟನು.

ಮಾರ್ಚ್ ತಿಂಗಳಲ್ಲಿ ಹಣ ಕೊಡುವುದಾಗಿ ಶ್ರೀದೇವಿ ಹೇಳಿದ್ದಳು. ಆದರೆ, ಗಡುವು ಮುಗಿದರೂ ಹಣ ನೀಡಲಿಲ್ಲ. ಇದರ ನಡುವೆ ತನ್ನ ಪ್ರೀ ಸ್ಕೂಲ್‌ ಗೆ ಪಾಲುದಾರನಾಗುವಂತೆ ಆಕೆ ಒತ್ತಾಯಿಸಿದಳು. ಆದರೆ, ಇದು ಇಷ್ಟವಿಲ್ಲದೇ ರಾಕೇಶ್ ಆಕೆಯಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದನು. ಇದಾದ ಬಳಿಕ ಆತನನ್ನು ಬ್ಲಾಕ್‌ಮೇಲ್ ಮಾಡಲು ಮುಂದಾಗಳು.

ರಾಕೇಶ್‌ನನ್ನು ಹೆದರಿಸಲು ಅರುಣ್ ಮತ್ತು ಸಾಗರ್ ಹೆಸರಿನ ಇಬ್ಬರ ನೆರವು ಪಡೆದ ಶ್ರೀದೇವಿ, ತನ್ನ ಬಳಿ ಇದ್ದ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದಳು. ರಾಕೇಶ್, ಶ್ರೀದೇವಿ ಜತೆ ಚಾಟಿಂಗ್ ಕೂಡ ನಡೆಸಿದ್ದು. ಎಲ್ಲವನ್ನು ಬಹಿರಂಗಪಡಿಸುತ್ತೇನೆ. ಚಾಟ್ ಡಿಲೀಟ್ ಮಾಡಬೇಕೆಂದರೆ, 50 ಲಕ್ಷ ರೂ. ಕೊಡು ಎಂದು ಬೇಡಿಕೆ ಇಟ್ಟಿದ್ದಳು. ಅಷ್ಟೇ ಅಲ್ಲದೆ, ತನ್ನ ಬಳಿ ಇರುವ ಫೋಟೋ ಮತ್ತು ವಿಡಿಯೋವನ್ನು ಡಿಲೀಟ್ ಮಾಡಲು 1 ಕೋಟಿ ರೂಪಾಯಿಗೆ ಶ್ರೀದೇವಿ ಬೇಡಿಕೆ ಇಟ್ಟಿದ್ದಳು.

ಶ್ರೀದೇವಿಯ ಬ್ಲಾಕ್‌ಮೇಲ್‌ ಗೆ ಹೆದರಿದ ರಾಕೇಶ್ ಆರಂಭದಲ್ಲಿ 20 ಲಕ್ಷ ರೂ. ಕೊಡಲು ಒಪ್ಪಿಕೊಂಡಿದ್ದ. ಅಲ್ಲದೆ, ಅದೇ ಸಮಯದಲ್ಲಿ ಆತ 1.50 ಲಕ್ಷ ರೂ. ಹಣ ಸಹ ನೀಡಿದ್ದ. ಯಾವಾಗ ಅವರಿಂದ ಹಣಕ್ಕಾಗಿ ಕಿರುಕುಳ ಜಾಸ್ತಿಯಾದಾಗ ರಾಕೇಶ್, ಪೊಲೀಸರನ್ನು ಸಂಪರ್ಕಿಸಿ, ದೂರು ಸಹ ದಾಖಲಿಸಿದನು. ಪ್ರಕರಣ ದಾಖಲಿಸಿದ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿ, ಶ್ರೀದೇವಿ ಗ್ಯಾಂಗ್ ಅನ್ನು ಖೆಡ್ಡಾಗೆ ಕೆಡವಿದ್ದಾರೆ.

ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ತನಿಖೆ ಮುಂದುವರಿದಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner