No Ads

ಹೆಣ ತುಂಬಿದ್ದ ಸೂಟ್ಕೇಸ್ ನದಿಗೆ ಎಸೆಯಲು ಬಂದಿದ್ದ ಅಮ್ಮ ಮಗಳು ರೆಡ್ ಹ್ಯಾಂಡ್ ಆಗಿ ಸಿಕ್ಬಿದ್ರು..!

India 2025-02-25 16:46:02 923
post

ಶವ ತುಂಬಿದ್ದ ಸೂಟ್​ಕೇಸ್ ನದಿಗೆ​ ಎಸೆಯಲು ಹೋಗಿ ಅಮ್ಮ ಮಗಳು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಗಂಗಾನದಿಯಲ್ಲಿ ಸೂಟ್​ಕೇಸ್​ನ್ನು ವಿಲೇವಾರಿ ಮಾಡಲು ಯತ್ನಿಸುತ್ತಿದ್ದ ಅಮ್ಮ-ಮಗಳನ್ನು ಸ್ಥಳೀಯರು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಫಲ್ಗುಣಿ ಘೋಷ್ ಮತ್ತು ಆಕೆಯ ತಾಯಿ ಆರತಿ ಘೋಷ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಮೃತದೇಹವನ್ನು ಫಲ್ಗುಣಿ ಘೋಷ್ ಅವರ ಮಾವನ ಸಹೋದರಿ ಸುಮಿತಾ ಘೋಷ್ (55) ಎಂದು ತಿಳಿದಬಂದಿದೆ . ಉತ್ತರ ಕೋಲ್ಕತ್ತಾದ ಕುಮಾರ್ತುಲಿಯ ಗಂಗಾ ನದಿಯ ದಡದ ಬಳಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಮಹಿಳೆಯರು ನೀಲಿ ಬಣ್ಣದ ಟ್ರಾಲಿ ಬ್ಯಾಗ್‌ನೊಂದಿಗೆ ಕಾಣಿಸಿಕೊಂಡಿದ್ದರು.

ಸ್ಥಳೀಯರು ಅವರ ಅನುಮಾನಾಸ್ಪದ ಚಲನವಲನವನ್ನು ಗಮನಿಸಿ ಕೇಳಿದ್ದಾರೆ. ಮಹಿಳೆಯರು ಬ್ಯಾಗ್ ತೆರೆಯಲು ನಿರಾಕರಿಸಿದ್ದು, ಗದರಿಸಿ ಕೇಳಿದಾಗ ತಮ್ಮ ಸಾಕು ನಾಯಿ ಸತ್ತು ಹೋಗಿತ್ತು ಅದರ ದೇಹವನ್ನು ನೀರಿನಲ್ಲಿ ಹಾಕಲು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು. ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಯಿತು, ಏನೇ ಆದರೂ ಬ್ಯಾಗ್​ನ ಜಿಪ್​ ತೆಗೆಯಲು ಸಿದ್ಧರಿರಲಿಲ್ಲ.

ಈ ಮಧ್ಯೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಸ್ಥಳಕ್ಕೆ ಬಂದರು. ಟ್ರಾಲಿ ಬ್ಯಾಗ್ ಅನ್ನು ಬಲವಂತವಾಗಿ ತೆರೆದಾಗ ಒಳಗೆ ಮಹಿಳೆಯ ರಕ್ತಸಿಕ್ತ ಶವ ಪತ್ತೆಯಾಗಿದೆ. ನಂತರ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಬಂಧಿಸಲಾಯಿತು.

ಫಲ್ಗುಣಿ ಹೇಳಿಕೆಯ ಪ್ರಕಾರ, ಮೃತ ಸುಮಿತಾ ತನ್ನ ಮಾವನ ಸಹೋದರಿ. ಅಸ್ಸಾಂನ ಜೋರ್ಹತ್ ಮೂಲದ ಸುಮಿತಾ ತನ್ನ ಪತಿಯಿಂದ ಬೇರ್ಪಟ್ಟಿದ್ದು, ಫೆಬ್ರವರಿ 11 ರಿಂದ ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ತಾಯಿ-ಮಗಳೊಂದಿಗೆ ವಾಸಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೋಮವಾರ ಸಂಜೆ ಫಲ್ಗುಣಿ ಜೊತೆ ನಡೆದ ತೀವ್ರ ವಾಗ್ವಾದದಲ್ಲಿ ಸುಮಿತಾ ಸಾವನ್ನಪ್ಪಿದ್ದಾರೆ ಎಂದು ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ಜಗಳ ನಡೆದಿತ್ತು. ಫಲ್ಗುಣಿ ಮೃತಳನ್ನು ಗೋಡೆಗೆ ತಳ್ಳಿದ್ದರಿಂದ ಆಕೆ ಪ್ರಜ್ಞೆತಪ್ಪಿ ಬಿದ್ದಿದ್ದಳು. ಪ್ರಜ್ಞೆ ಮರಳಿ ಬಂದಾಗ, ದೊಡ್ಡ ಜಗಳವೇ ನಡೆಯಿತು. ಫಲ್ಗುಣಿ ಅವಳ ಮುಖ ಮತ್ತು ಕುತ್ತಿಗೆಗೆ ಇಟ್ಟಿಗೆಯಿಂದ ಹೊಡೆದ ಕಾರಣ ಆಕೆ ಸಾವನ್ನಪ್ಪಿದ್ದಳು. ನಂತರ ತಾಯಿ-ಮಗಳು ಶವವನ್ನು ಟ್ರಾಲಿ ಬ್ಯಾಗಿನಲ್ಲಿ ಹಾಕಿ ನದಿಗೆ ಎಸೆಯಲು ಪ್ರಯತ್ನಿಸಿದ್ದರು.

 

No Ads
No Reviews
No Ads

Popular News

No Post Categories
Sidebar Banner
Sidebar Banner