13 ವರ್ಷದ ಬಾಲಕ ದೇವರ್ಜಯೇ ಡಿಜೆ ಡೇನಿಯಲ್ ಅವರ ಆಸೆಯನ್ನು ಕಾಂಗ್ರೆಸ್ನ ಜಂಟಿ ಕಾರ್ಯಕ್ರಮದಲ್ಲಿ ಡೋನಾಲ್ಡ್ ಟ್ರಂಪ್ ಅವರು ಈಡೇರಿಸಿದ್ದಾರೆ. ತಾನು ಕೊನೆಯುಸಿರೆಳೆಯುವುದರ ಒಳಗೆ ಪೊಲೀಸ್ ಅಧಿಕಾರಿ ಆಗಬೇಕು ಎಂಬುದು ಬಾಲಕನ ಜೀವನದ ಆಸೆ ಆಗಿತ್ತು. ಹೀಗಾಗಿ ಬಾಲಕನ ಕೊನೆ ಆಸೆಯಂತೆ ಸೀಕ್ರೆಟ್ ಸರ್ವೀಸ್ ಏಜೆಂಟ್ ಆಗಿ ನೇಮಿಸಲಾಗಿದೆ. 13 ವರ್ಷದ ಬಾಲಕನ ಆಸೆಯಂತೆ ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ ಏಜೆಂಟ್ ಆಗಿ ನೇಮಕ ಮಾಡಿದ್ದಾರೆ.
ಬಾಲಕ ದೇವರ್ಜಯೇ ಡಿಜೆ ಡೇನಿಯಲ್‌ಗೆ 2018 ರಿಂದ ಬ್ರೈನ್ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಇವರು ಇನ್ನು ಕೇವಲ 5 ತಿಂಗಳು ಮಾತ್ರ ಬದುಕುತ್ತಾರೆ ಎಂದಿದ್ದ ವೈದ್ಯರು... 13 ವರ್ಷದ ಡಿಜೆ ಡೇನಿಯಲ್‌ಗೆ 2018 ರಲ್ಲಿ ಅಪರೂಪದ ಕ್ಯಾನ್ಸರ್ ಕಾಯಿಲೆ ಇರುವುದು ಪತ್ತೆಯಾಯಿತು. ಅಂದು ವೈದ್ಯರು ಬಾಲಕನಿಗೆ ಕೇವಲ ಐದು ತಿಂಗಳುಗಳ ಕಾಲ ಬದುಕಬಹುದು ಎಂದಿದ್ದರು. ಆದರೂ ಬಾಲಕ ಎಲ್ಲಾ ಪ್ರತಿಕೂಲಗಳ ವಿರುದ್ಧ ಹೋರಾಡಿ ಈಗ ಪೊಲೀಸ್ ಅಧಿಕಾರಿಯಾಗುವ ತಮ್ಮ ಹಾಗೂ ತಂದೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಟ್ರಂಪ್ ತಮ್ಮ ಮೊದಲ ಜಂಟಿ ಅಧಿವೇಶನದ ಭಾಷಣದಲ್ಲಿ ಈ ಘೋಷಣೆ ಮಾಡಿದ್ದಾರೆ
ಅಮೆರಿಕದ ಸೀಕ್ರೆಟ್ ಸರ್ವೀಸ್ನ ನಿರ್ದೇಶಕರು ಆಗಿರುವ ಸೀನ್ ಕುರಾನ್ ಅವರಿಗೆ ಬಾಲಕನನ್ನು ನೇಮಿಸುವಂತೆ ಟ್ರಂಪ್ ಅವರು ಸೂಚನೆ ಕೊಟ್ಟಿದ್ದರು. ಅದರಂತೆ ಸೀನ್ ಕುರಾನ್ ಅವರು ಬಾಲಕನನ್ನು ಸೀಕ್ರೆಟ್ ಸರ್ವೀಸ್ ಏಜೆಂಟ್ ಬ್ಯಾಡ್ಜ್ ನೀಡಿ ಗೌರವಿಸಿದ್ದಾರೆ. ಇನ್ನೂ ಹೈಸ್ಕೂಲ್ ವಿದ್ಯಾರ್ಥಿ ಜೇಸನ್ ಹಾರ್ಟ್ಲಿಯನ್ನು ಅಮೆರಿಕದ ಮಿಲಿಟರಿ ಅಕಾಡೆಮಿಯ ವೆಸ್ಟ್ ಪಾಯಿಂಟ್ನಲ್ಲಿ ಕೆಲಸ ಮಾಡುವ ಅವಕಾಶ ನೀಡಿದರು. ತಂದೆ ಕೆಲಸ ಮುಂದುವರಿಸಲು ಮಿಲಿಟರಿ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಇನ್ನು ಮಹತ್ವದ ಹುದ್ದೆಗೆ ನೇಮಕ ಮಾಡಿದ್ದಕ್ಕಾಗಿ ಬಾಲಕ ದೇವರ್ಜಯೇ ಡಿಜೆ ಡೇನಿಯಲ್, ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Log in to write reviews