ನಾಲ್ವರ ಹತ್ಯೆ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಪೊಲೀಸರ ವಿಚಾರಣೆಯ ವೇಳೆ ಮನೆಯ ಮಗನೇ ಇಡೀ ಕುಟುಂಬವನ್ನು ಬರ್ಬರವಾಗಿ ಕೊಲೆ ಮಾಡಿಸಲು ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ನ ಮದುವೆ ಕಾರ್ಯಕ್ರಮಕ್ಕಾಗಿ ಸಂಬಂಧಿಕರು ಗದಗಕ್ಕೆ ಬಂದಿದ್ದರು. ಮೊದಲನೇ ಮಹಡಿಯ ಕೋಣೆಯಲ್ಲಿ ಪತಿ, ಪತ್ನಿ, ಮಗಳು ಮಲಗಿಕೊಂಡಿದ್ದರು. ಇದೇ ವೇಳೆ ಏಕಾಏಕಿ ಮನೆಯ ಹಿಂದಿರುವ ಕಿಟಕಿಯಿಂದ ಬಂದ ಹಂತಕರು ಕೊಲೆ ಮಾಡಿದ್ದಾರೆ. ಬಾಗಿಲು ಸದ್ದು ಕೇಳಿ ಅನುಮಾನಗೊಂಡು ಕುಟುಂಬಸ್ಥರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಹಂತಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಾದ ಬಳಿಕ ಮನೆಯ ಹಿಂಬದಿಯ ಚರಂಡಿಯಲ್ಲಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಇದರ ಜೊತೆಗೆ ಚಿನ್ನದ ಬಳೆಗಳು ಎರಡು ಜತೆ ಶೂಗಳು ಪತ್ತೆಯಾಗಿವೆ. ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷ (16) ಮೃತ ದುರ್ದೈವಿಗಳು. ಈ ಸುದ್ದಿ ಕೇಳಿ ಇಡೀ ರಾಜ್ಯವನ್ನೇ ಬೆಚ್ಚಿ ಬಿದ್ದಿತ್ತು. ಆದರೆ ಇದೀಗ ಈ ಕೊಲೆ ಹಿಂದಿನ ಅಸಲಿ ಸತ್ಯ ಕೇಳಿ ಶಾಕ್ ಆಗಿದ್ದಾರೆ. ಈ ಕೇಸ್ ಸಂಬಂಧ ಪೊಲೀಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಕೊಲೆ ಬಗ್ಗೆ ಆರೋಪಿ ಅಸಲಿ ಮಾಹಿತಿ ಬಿಚ್ಚಿಟ್ಟಿದ್ದಾನೆ. ಪ್ರಕಾಶ್ ಬಾಕಳೆ ಹಿರಿಯ ಮಗ ವಿನಾಯಕ್ ಬಾಕಳೆಯೇ ಈ ಕೊಲೆಗೆ ಸುಪಾರಿ ನೀಡಿರುವುದು ತನಿಖೆ ಮೂಲಕ ತಿಳಿದು ಬಂದಿದೆ. ಹೌದು, ಬಾಕಳೆ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲು ಖುದ್ದು ಹಿರಿಯ ಮಗ ವಿನಾಯಕ್ ಬಾಕಳೆ 65 ಲಕ್ಷ ರೂಪಾಯಿ ಡೀಲ್ ಮಾಡಿದ್ದನಂತೆ. ಅಲ್ಲದೇ, ಮಹಾರಾಷ್ಟ್ರ ಮೂಲದ ಫಯಾಜ್ ಆ್ಯಂಡ್ ಗ್ಯಾಂಗ್ಗೆ ಮುಂಗಡವಾಗಿ 2 ಲಕ್ಷ ರೂಪಾಯಿ ನೀಡಿದ್ದನಂತೆ. ಈ ಕೊಲೆಗೆ ಆಸ್ತಿ ಹಂಚಿಕೆ ವಿಷಯ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇನ್ನು, ಈ ಕೊಲೆ ಕೇಸ್ ಬಗ್ಗೆ ತನಿಖೆ ನಡೆಸಿದ್ದ ಸಿಬ್ಬಂದಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. ಕೊಲೆ ಪ್ರಕರಣ ಬೇದಿಸಿದ್ದಕ್ಕೆ ಡಿಜಿ, ಐಜಿಪಿ ವಿಕಾಸ್ ಕುಮಾರ್ ಶ್ಲಾಘನೆ ವ್ಯಕ್ತವಾಗುತ್ತಿದೆ.
ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ: ಅಸಲಿ ಕಾರಣ ಬಹಿರಂಗ
No Ads
Log in to write reviews