ರೆಸಾರ್ಟ್ ಪಾಲಿಟಿಕ್ಸ್ ಪಕ್ಕದ ಆಂಧ್ರಪ್ರದೇಶದಲ್ಲೂ ನಡೆದಿದೆ. ಅಚ್ಚರಿಯೆಂದರೆ ಆಂಧ್ರ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಬರೋಬ್ಬರಿ 38 ರಾಜಕಾರಣಿಗಳನ್ನು ಬೆಂಗಳೂರಿನ ರೆಸಾರ್ಟ್‌ಗೆ ಶಿಫ್ಟ್ ಮಾಡಿಸಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕದ ರಾಜಕೀಯದಲ್ಲಿ ಈ ಹಿಂದೆ ಖ್ಯಾತಿ ಗಳಿಸಿದ್ದ ರೆಸಾರ್ಟ್ ರಾಜಕಾರಣವು ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು. ಅಧಿಕಾರದ ಆಸೆಗಾಗಿ ರಾತ್ರೋರಾತ್ರಿ ಶಾಸಕರನ್ನು ರೆಸಾರ್ಟ್‌ಗಳಿಗೆ ಕರೆದೊಯ್ದು ಫುಲ್ ಟೈಟ್ ಸೆಕ್ಯುರಿಟಿ ಕೊಡಲಾಗಿತ್ತು.
ಇದೀಗ ಈದೇ ರೆಸಾರ್ಟ್ ಪಾಲಿಟಿಕ್ಸ್ ಪಕ್ಕದ ಆಂಧ್ರಪ್ರದೇಶದಲ್ಲೂ ನಡೆದಿದೆ.
ಇತ್ತೀಚೆಗಷ್ಟೇ ಜಗನ್ ಅವರನ್ನ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಅವರು ಅಧಿಕಾರದಿಂದ ಕೆಳಗಿಳಿಸಿದ್ದರು. ಇದರ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಆಂಧ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ರಾಜ್ಯದಲ್ಲಿ ಈ ಹಿಂದೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಶಾಸಕರು ಹಾಗೂ ಸಚಿವರನ್ನ ರೆಸಾರ್ಟ್‌ಗಳಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಆಂಧ್ರಪ್ರದೇಶದಲ್ಲಿ ಪುರಸಭೆ ಮಟ್ಟದಲ್ಲೂ ರೆಸಾರ್ಟ್ ರಾಜಕಾರಣ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ವೈಎಸ್‌ಆರ್‌ಸಿಪಿ ಪಕ್ಷದ 6 ಸದಸ್ಯರು ಎನ್‌ಡಿಎಗೆ ಪಕ್ಷಾಂತರಗೊಂಡಿದ್ದರು. ಈ ಹಿನ್ನೆಲೆ ಜಗನ್ ಮೋಹನ್ ರೆಡ್ಡಿ ಅವರು ಬರೋಬ್ಬರಿ 38 ಕಾರ್ಪೊರೇಟರ್‌ಗಳನ್ನು ಬೆಂಗಳೂರಿನ ರೆಸಾರ್ಟ್‌ಗೆ ಶಿಫ್ಟ್ ಮಾಡಿಸಿದ್ದಾರೆ. ಇದರಿಂದಾಗಿ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ (ಜಿವಿಎಂಸಿ) ಎನ್‌ಡಿಎ ಬಲ 70ಕ್ಕೆ ಏರಿದೆ.
ಹೆಚ್ಚಿನ ಮಂದಿ ಪಕ್ಷಾಂತರ ನಿರೀಕ್ಷೆದ ನಿರೀಕ್ಷೆಯಲ್ಲಿದ್ದು, ವೈಎಸ್‌ಆರ್‌ಸಿಪಿ ಮೇಯರ್ ಹರಿ ವೆಂಕಟ ಕುಮಾರಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಎನ್‌ಡಿಎ ಮುಂದಾಗಿದೆ. ಬೆಂಗಳೂರಿನ ರೆಸಾರ್ಟ್‌ಗೆ ಈಗ ಭರಿಸಲಿರುವ ವೆಚ್ಚವು ಕಾರ್ಪೊರೇಟರ್‌ಗಳ ಆರು ತಿಂಗಳ ಸಂಬಳಕ್ಕಿಂತ ಹೆಚ್ಚು ಎನ್ನಲಾಗುತ್ತಿದೆ. ಬೆಂಗಳೂರಿಗೆ ಹಂತ ಹಂತವಾಗಿ ಕಾರ್ಪೊರೇಟರ್‌ಗಳನ್ನು ಶಿಫ್ಟ್ ಮಾಡಲಾಗಿದೆ. ಮೊದಲಿಗೆ 23 ಕಾರ್ಪೊರೇಟರ್‌ಗಳನ್ನು ಸ್ಥಳಾಂತರಿಸಲಾಗಿತ್ತು. ಮಂಗಳವಾರ ತಡರಾತ್ರಿ ಮತ್ತೆ ಹಲವು ನಾಯಕರು ಶಿಫ್ಟ್ ಆಗಿದ್ದಾರೆ. ವಿಶಾಖಪಟ್ಟಣಂ ಮೇಯರ್ ಗೋಲಗಣಿ ಹರಿ ವೆಂಕಟ ಕುಮಾರಿ ವಿರುದ್ಧ ವೈಎಸ್‌ಆರ್‌ಸಿಪಿ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ. ಪಕ್ಷಾಂತರ ಭಯದಿಂದ ಜಗನ್ ಕಟ್ಟೆಚ್ಚರದಲ್ಲಿದ್ದಾರೆ ಎಂದು ಹೇಳಲಾಗಿದೆ.
2020ರಲ್ಲಿ ನಡೆದ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ವೈಎಸ್ಆರ್‌ಸಿಪಿ 98 ಸ್ಥಾನಗಳಲ್ಲಿ 59 ಸ್ಥಾನಗಳನ್ನು ಗೆದ್ದಿತ್ತು. ತೆಲುಗು ದೇಶಂ ಪಕ್ಷ (ಟಿಡಿಪಿ) 29 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಜನಸೇನಾ ಪಾರ್ಟಿ ಮೂರು ಸ್ಥಾನಗಳನ್ನು ಗೆದ್ದರೆ, ಸಿಪಿಐ, ಸಿಪಿಎಂ, ಬಿಜೆಪಿ ಮತ್ತು ಇತರ ಸ್ವತಂತ್ರ ಅಭ್ಯರ್ಥಿಗಳು ತಲಾ ಒಂದು ಸ್ಥಾನಗಳನ್ನು ಗೆದ್ದಿದ್ದರು. ಆದರೆ, 2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿತ್ತು. ಹಲವಾರು ಕಾರ್ಪೊರೇಟರ್ಗಳು ಮೈತ್ರಿಕೂಟಕ್ಕೆ ಪಕ್ಷಾಂತರಗೊಂಡು ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ 53ಕ್ಕೆ ಹೆಚ್ಚಿಸಿದ್ದರು.
ಹಾಗಾಗಿ ಅಂದಿನಿಂದ ವೈಎಸ್ಆರ್‌ಸಿಪಿ ಬಲ 38ಕ್ಕೆ ಇಳಿದಿದೆ. ಇದೇ ಆತಂಕದಲ್ಲಿ ಈಗ ಕಾರ್ಪೊರೇಟರ್‌ಗಳನ್ನು ಬೆಂಗಳೂರಿನ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಜಗನ್ ಅವರಿಗೆ ಬೆಂಗಳೂರಿನಲ್ಲಿ ಹಲವು ಆಸ್ತಿಗಳಿದ್ದು, ಇಲ್ಲಿನ ರಾಜಕೀಯ ನಾಯಕರ ಬೆಂಬಲವೂ ಇರುವುದರಿಂದ ಇದೇ ಭಾಗದಲ್ಲಿ ನಾಯಕರನ್ನು ಇರಿಸುವುದು ಸೇಫ್ ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
Log in to write reviews