No Ads

ಪುಷ್ಪ 2: ‘ನನ್ನ ವಿರುದ್ಧ ತಪ್ಪು ಮಾಹಿತಿ ಹರಡಿ ಚಾರಿತ್ರ‍್ಯ ಹರಣ'

India 2024-12-21 23:22:32 9
post

ಹೈದರಾಬಾದ್, ಡಿ.21 : ಸಂಧ್ಯಾ ಚಿತ್ರಮಂದಿರದಲ್ಲಿ ಸಂಭವಿಸಿದ ಕಾಲ್ತುಳಿದಲ್ಲಿ ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಆಡಿರುವ ಮಾತುಗಳು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಖ್ಯಾತ ನಟ ಅಲ್ಲು ಅರ್ಜುನ್ ಸುದ್ದಿಗೋಷ್ಠಿ ಕರೆದು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬoಧಿಸಿದoತೆ ಅನಾವಶ್ಯಕವಾಗಿ ತಮ್ಮ ಮೇಲೆ ಆರೋಪಗಳನ್ನು ಮಾಡಲಾಗುತ್ತಿದ್ದು, ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಮೂಲನ ತನ್ನ ವರ್ಚಸ್ಸಿಗೆ ಧಕ್ಕೆ ತಂದು ಚಾರಿತ್ರ‍್ಯ ಹರಣ ಮಾಡಲು ಯತ್ನಿಸಲಾಗುತ್ತಿದೆ ಅಂತಾ ತೆಲುಗು ನಟ ಅಲ್ಲು ಅರ್ಜುನ್ ಹೇಳಿಕೆ ನೀಡಿದ್ದಾರೆ.  ನನ್ನ ವಿರುದ್ಧದ ಆರೋಪಗಳು ಅವಮಾನಕರ.. ಕಾಲ್ತುಳಿತ ಪ್ರಕರಣದಲ್ಲಿ ಸಾಕಷ್ಟು ತಪ್ಪು ಮಾಹಿತಿ ಹರಡಲಾಗುತ್ತಿದೆ. ನಾನು ಯಾರನ್ನೂ, ಯಾವುದೇ ಇಲಾಖೆಯನ್ನು ಅಥವಾ ರಾಜಕೀಯ ನಾಯಕರನ್ನು ದೂಷಿಸಲು ಪ್ರಯತ್ನಿಸುತ್ತಿಲ್ಲ ಇದು ಅವಮಾನಕರ ಮತ್ತು ಇಲ್ಲ ಸಲ್ಲದ ಆರೋಪಗಳ ಮೂಲಕ ನನ್ನ ವರ್ಚಸ್ಸನ್ನು ಹಾಳು ಮಾಡಲಾಗುತ್ತಿದೆ ಎಂಬoತೆ ಭಾಸವಾಗುತ್ತಿದೆ. ದಯವಿಟ್ಟು ನನ್ನನ್ನು ಹೀಗೇ ಎಂದು ನೀವೇ ನಿರ್ಣಯಿಸಬೇಡಿ.. ಆ ಘಟನೆ ದುರದೃಷ್ಟಕರ.. ಅದು ಆಗಬಾರದಾಗಿತ್ತು. ಅದಕ್ಕೆ ನಾನು ವಿಷಾದಿಸುತ್ತೇನೆ. ನನಗೆ ಅದೇ ವಯಸ್ಸಿನ ಮಗುವಿದೆ, ನನಗೆ ನೋವು ಅನಿಸುವುದಿಲ್ಲವೇ? ಇದೊಂದು ಅನಿರೀಕ್ಷಿತ ಘಟನೆ.. ಯಾರನ್ನೂ ದೂಷಿಸಬಾರದು ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner