ಬೆಂಗಳೂರು, ಡಿ.04 : ಸಿಲಿಕಾನ್ ಸಿಟಿಗೆ ಆಧಾರವಾದ ಕಾವೇರಿ ನೀರಿನ ದರ ಹೆಚ್ಚಿಸಲು ರಾಜ್ಯ ಸರ್ಕಾರ ಹಾಗೂ ಜಲಮಂಡಳಿ ಹೊಸ ಯೋಜನೆ ರೂಪಿಸಿದೆ. ಇಷ್ಟು ದಿನ ಜನಾಭಿಪ್ರಾಯ ಪಡೆಯುತ್ತಿದ್ದ ಜಲ ಮಂಡಳಿ ಮಂಡಳಿ ಈಗ ನೇರವಾಗಿ ಜನರಿಂದಲೇ ಆಯ್ಕೆಯಾಗಿರುವ ಬೆಂಗಳೂರಿನ ಶಾಸಕರ ಮೊರೆ ಹೋಗಿ ಪತ್ರ ಮುಖೇನ ತಮ್ಮ ಅಭಿಪ್ರಾಯ ಹಾಗೂ ಸಲಹೆ ಜೊತೆ ಸಹಕಾರ ನೀಡಿ ಅಂತ ಮನವಿ ಮಾಡಿಕೊಳ್ಳುತ್ತಿದೆ. ನಗರದ 28 ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಜಲಮಂಡಳಿ ಅಧ್ಯಕ್ಷರು ಪತ್ರ ಬರೆದು ಸಂಸ್ಥೆ ನಷ್ಟದಲ್ಲಿದೆ. ಮಾಸಿಕ 81 ಕೋಟಿ ರೂಪಾಯಿ ಹೊರೆ ಹೆಚ್ಚಾಗ್ತಿರೋ ಹಿನ್ನೆಲೆ ಸಂಸ್ಥೆ ನಡೆಸಲು ಕಷ್ಟವಾಗ್ತಿದೆ. ಕಳೆದ 10 ವರ್ಷಗಳಿಂದ ಕಾವೇರಿ ನೀರಿನ ಬೆಲೆ ಏರಿಕೆ ಮಾಡಿಲ್ಲ. ಆದ್ದರಿಂದ ದರ ಏರಿಕೆ ಮಾಡಲು ನಿಮ್ಮ ಅಭಿಪ್ರಾಯ ತಿಳಿಸಿ ಅಂತ ಪತ್ರ ಮುಖೇನ ಮನವಿ ಮಾಡಿದ್ದಾರೆ. ಆರ್ಥಿಕ ನಷ್ಟದಲ್ಲಿ ಸಿಲುಕಿ ಒದ್ದಾಡ್ತಿರುವ ಬೆಂಗಳೂರು ಜಲಮಂಡಳಿಗೆ ಈಗ ನೀರಿನ ದರ ಏರಿಕೆ ಅನಿವಾರ್ಯವಾಗಿದೆ. ಪ್ರಮುಖವಾಗಿ ಏಕಾಏಕಿ ಜನರಿಗೆ ಹೊರೆ ಮಾಡದೆ ಮಾಸ್ಟರ್ ಪ್ಲಾನ್ ಮಾಡಿದೆ.
ಕಾವೇರಿ ನೀರಿನ ದರ ಏರಿಕೆಗೆ ಜಲಮಂಡಳಿಯಿoದ ಹೊಸ ಪ್ಲಾನ್..!
No Ads
Log in to write reviews