No Ads

ನಿದ್ದೆ ಮಾತ್ರೆ ನುಂಗಿ ಆಸ್ಪತ್ರೆ ಸೇರಿದ ಖ್ಯಾತ ಹಿನ್ನೆಲೆ ಗಾಯಕಿ; 2 ದಿನ ಮನೆಯಲ್ಲೇ ಲಾಕ್..!

ಮನರಂಜನೆ 2025-03-05 13:47:21 1885
post

ಖ್ಯಾತ ಹಿನ್ನೆಲೆ ಗಾಯಕಿ, ನಟಿ, ತಮಿಳು ಬಿಗ್‌ಬಾಸ್‌ ಸೀಸನ್‌ 1ರ ಸ್ಪರ್ಧಿ ಕಲ್ಪನಾ ರಾಘವೇಂದ್ರ ಅವರು ಆತ್ಮಹತ್ಯೆ ಯತ್ನ ಮಾಡಿದ್ದಾರೆ. ಸದ್ಯ ಅವರು ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ್ಮಹತ್ಯೆ ಪ್ರಯತ್ನ ಮಾಡಿ-ಸಾವು-ಬದುಕಿನ ಹೋರಾಟ ಮಾಡುತ್ತಿದ್ದ ಕಲ್ಪನಾರನ್ನ ನೆರೆಮನೆಯವರು ಮತ್ತು ಪೊಲೀಸರು ಸೇರಿ ಅಪಾಯದಿಂದ ರಕ್ಷಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಲ್ಪನಾ ಹಲವು ನಿದ್ದೆ ಮಾತ್ರೆಗಳನ್ನ ತಿಂದಿದ್ದಾಗಿ ವರದಿಯಾಗಿದೆ.

44 ವರ್ಷದ ಕಲ್ಪನಾ ಆರೋಗ್ಯ ಸ್ಥಿರವಾಗಿದೆ. ಸದ್ಯ ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳಿಂದ ಕಲ್ಪನಾ ಅವರ ಮನೆಯ ಬಾಗಿಲು ತೆರೆದಿಲ್ಲ ಎಂಬುದನ್ನ ಅವರ ಮನೆಯ ಸೆಕ್ಯೂರಿಟಿ ಗಮನಿಸಿದ್ದ. ಗಾಬರಿಯಿಂದ ಆತ ನೆರೆಮನೆಯವರಿಗೆ ವಿಷಯ ತಿಳಿಸಿದ್ದ. ಬಳಿಕ ಅಕ್ಕ-ಪಕ್ಕದ ಮನೆಯವರೆಲ್ಲ ಸೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಲವಂತವಾಗಿ ಬಾಗಿಲು ಒಡೆದು-ತೆಗೆದಾಗ ಕಲ್ಪನಾ ವಿಷ ಸೇವಿಸಿ, ಅಸ್ವಸ್ಥರಾಗಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲ್ಪನಾ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಹೀಗೆ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅವರ ಪತಿ ಚೆನ್ನೈನಲ್ಲಿ ಇದ್ದರು. ಫೋನ್‌ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಕಲ್ಪನಾ ಫೋನ್‌ಗೆ ಸಿಕ್ಕಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಚೆನ್ನೈನಿಂದ ಹೈದರಾಬಾದ್‌ಗೆ ಆಗಮಿಸಿದ್ದಾರೆ.

ಕಲ್ಪನಾ ಫೇಮಸ್‌ ಹಿನ್ನೆಲೆ ಗಾಯಕಿ. 2010ರಲ್ಲಿ ಮಲಯಾಳಂ ಸ್ಟಾರ್‌ ಸಿಂಗ್‌ ರಿಯಾಲಿಟಿ ಶೋವನ್ನ ಗೆದ್ದಿದ್ದರು. ಇವರು ತಮಿಳು ಖ್ಯಾತ ಹಿನ್ನೆಲೆ ಗಾಯಕರಾಗಿದ್ದ ಟಿ.ಎಸ್‌.ರಾಘವೇಂದ್ರ ಅವರ ಪುತ್ರಿ. ತಮ್ಮ 5ನೇ ವರ್ಷದಿಂದಲೇ ಹಾಡಲು ಶುರು ಮಾಡಿದ್ದಾರೆ. ಸಂಗೀತ ಕ್ಷೇತ್ರದ ದಿಗ್ಗಜರಾದ ಇಳಯರಾಜ, ಎ.ಆರ್‌.ರೆಹಮಾನ್‌ ಜೊತೆಗೂ ಅವರು ಕೆಲಸ ಮಾಡಿದ್ದಾರೆ.

ಗಾಯಕಿ ಕಲ್ಪನಾ ರಾಘವೇಂದ್ರ ಅವರು ಹೆಸರಾಂತ ಟಿಎಸ್ ರಾಘವೇಂದ್ರ ಅವರ ಮಗಳು. 2010ರಲ್ಲಿ ಮಲೆಯಾಳಂ ಸ್ಟಾರ್ ಸಿಂಗರ್ ಅವಾರ್ಡ್‌ ಕೂಡ ಪಡೆದಿದ್ದಾರೆ. ಕಲ್ಪನಾ ರಾಘವೇಂದ್ರ ಅವರು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ಇದೆ. ಆದರೆ ಈ ದುರಂತಕ್ಕೆ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.

No Ads
No Reviews
No Ads

Popular News

No Post Categories
Sidebar Banner
Sidebar Banner