No Ads

ಬಿಸಿಲ ಬೇಗೆಗೆ ದುಬಾರಿಯಾದ ನಿಂಬೆಹಣ್ಣು ಒಂದು ಹಣ್ಣಿಗೆ ಬರೋಬ್ಬರಿ 8 ರೂ.!

ವಾಣಿಜ್ಯ 2024-03-20 14:39:34 197
post

ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಕಂಡಿತೆಂದು ಖರೀದಿಗೆ ತೆರಳಿದರೆ ಒಮ್ಮೆ ಹೌಹಾರಬೇಕಾದ ಸ್ಥಿತಿ. ಯಾಕೆಂದರೆ ಇದರ ದರ ಬಲು ದುಬಾರಿಯಾಗಿದೆ. ನಿಂಬೆವೊಂದನ್ನು ಗರಿಷ್ಠ 8 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ!ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿಂಬೆಹಣ್ಣಿನ ದರ ಏರಿಕೆಯಾಗುತ್ತದೆ. ಆದರೆ ಈ ಬಾರಿ ಅದು ಮತ್ತಷ್ಟು ಏರಿಕೆಯಾಗಿದೆ. ಬಿಸಿಲ ಬೇಗೆಯ ನಡುವೆ ದಿನನಿತ್ಯ ಬಳಸುವ ನಿಂಬುವಿನ ದರವೂ ಗ್ರಾಹಕರಿಗೆ ಬಿಸಿಯೇರಿಸಿದೆ. ಇದರಿಂದ ಅಗತ್ಯದಷ್ಟು ಕೊಳ್ಳಲೂ ಆಗದೇ ಬಿಡಲೂ ಆಗದೇ ಪರಿತಪಿಸುವಂತಾಗಿದೆ.ಆರೋಗ್ಯಕ್ಕೆ ಹಿತಕಾರಿಯಾದ ನಿಂಬೆಯನ್ನು ಆಹಾರ ಪದಾರ್ಥಗಳಲ್ಲಿ ಅಗತ್ಯವಾಗಿ ಬಳಕೆ ಮಾಡಲಾಗುತ್ತದೆ. ಊಟಕ್ಕೆ ಉಪ್ಪಿನ ಕಾಯಿ ಇಲ್ಲದಿದ್ದರೆ ಹೇಗೆ ಸಪ್ಪೆಯೋ ಹಾಗೇ ಕೆಲವು ಅಡುಗೆ ಪದಾರ್ಥ ತಯಾರಿಯಲ್ಲಿ ನಿಂಬೆ ಇರುವಿಕೆ ಬಹಳ ಮುಖ್ಯ. ಅದರಲ್ಲೂ ಈ ಬೇಸಿಗೆಯಲ್ಲಿ ಜ್ಯೂಸ್‌ ಮಾಡಿಕೊಳ್ಳಲು ಇದು ಇರಲೇಬೇಕು. ಅದಕ್ಕಿಂತ ಹೆಚ್ಚಾಗಿ ಉಪ್ಪಿನಕಾಯಿಗೆ ನಿಂಬೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಈ ಹಣ್ಣಿನ ದರ ಜೇಬಿಗೆ ಕುತ್ತು ತಂದಿಟ್ಟಿದೆ. ಒಳ್ಳೆಯ ಗುಣಮಟ್ಟದ ನಿಂಬೆಯೊಂದಕ್ಕೆ 8 ರೂ.ಗಿಂತ ಹೆಚ್ಚು ಬೆಲೆಯಿಂದೆ. ಸಣ್ಣಸಣ್ಣ ನಿಂಬೆ ಕೊಂಡೊಯ್ದರೆ ಅದರಲ್ಲಿ ರಸವೇ ಇರುವುದಿಲ್ಲಎನ್ನುತ್ತಾರೆ ಗ್ರಾಹಕರು. ಸಾಮಾನ್ಯವಾಗಿ ಮಲೆನಾಡಿನ ಪ್ರದೇಶದಲ್ಲಿ ಮನೆಯಂಗಳದಲ್ಲಿ ಹೆಚ್ಚಾಗಿ ನಿಂಬೆ ಗಿಡಗಳಿರುತ್ತವೆ. ಮನೆ ಖರ್ಚಿಗೆ ಸಾಕಾಗುವಷ್ಟು ನಿಂಬೆ ಹಣ್ಣು ಈ ಗಿಡಗಳಲ್ಲೇ ಸಿಗುತ್ತವೆ. ಆದರೆ ಈ ಬಾರಿ ಮಳೆಗಾಲದಲ್ಲೇ ಮಳೆಯಾಗದೇ ಇರುವುದರಿಂದ ಇದರ ಇಳುವರಿ ಮೇಲೆ ಹೊಡೆತ ಬಿದ್ದಿದೆ. ಗಿಡಗಳಲ್ಲಿ ನಿಂಬೆ ಪ್ರಮಾಣ ತೀರಾ ಕಡಿಮೆಯಾಗಿದೆ. ಅದರಲ್ಲೂ ಬೇಸಿಗೆಯ ಅಬ್ಬರಕ್ಕೆ ಗಿಡಗಳನ್ನು ಬದುಕಿಸಿಡುವುದೇ ಸವಾಲಾಗಿದೆ.ಮಾರುಕಟ್ಟೆಯಲ್ಲಿ ಈಗ ನಿಂಬೆ ಇಟ್ಟುಕೊಂಡು ವ್ಯಾಪಾರ ಮಾಡುವವರ ಸಂಖ್ಯೆಯೂ ತೀರಾ ಕಡಿಮೆಯಿದೆ. ಯಾಕೆಂದರೆ ಹಣ್ಣೇ ಸಿಗುತ್ತಿಲ್ಲ. ಹೀಗಾಗಿ ಬೆರಳೆಣಿಕೆಯಲ್ಲಿ ವ್ಯಾಪಾರ ಮಾಡುವವರು ಕಾಣುತ್ತಿದ್ದಾರೆ. ನಾವು ಬಾಗಲಕೋಟದಿಂದ ಹಣ್ಣು ತಂದು ಮಾರಾಟ ಮಾಡುತ್ತಿದ್ದೇವೆ. ಅಲ್ಲಿಯೂ ಇಳುವರಿ ತೀರಾ ಕಡಿಮೆಯಿದೆ. ಹೀಗಾಗಿ ದರ ಹೆಚ್ಚಿಗೆ ಆಗಿದೆ. ನಿಂಬೆಯೊಂದಕ್ಕೆ 5 ರಿಂದ 8 ರೂ.ವರೆಗೂ ದರ ಇದೆ.ಬೇರೆ ಜಿಲ್ಲೆಗಳಿಂದ ನಾವು ತರುವ ನಿಂಬೆ ಹಣ್ಣು ತುಂಬಿದ ಚೀಲವೊಂದಕ್ಕೆ 7,500 ರೂ.ಇದೆ. ಅದರಲ್ಲಿ ಸಣ್ಣ ನಿಂಬೆಯಾದರೆ 1,500 ಹಣ್ಣು ಇರುತ್ತದೆ. ದೊಡ್ಡದಾರೆ 1,100 ನಿಂಬೆ ಹಣ್ಣಿರುತ್ತದೆ. ಇನ್ನು ಮಿಶ್ರ ಹಣ್ಣಿಗಳಿದ್ದರೆ ಚೀಲಕ್ಕೆ 5,600 ರೂ. ದರ ಹೇಳುತ್ತಾರೆರಾಜ್ಯದಲ್ಲಿ ಹೆಚ್ಚಾಗಿ ನಿಂಬೆ ಪೂರೈಸುವ ವಿಜಯಪುರ ಜಿಲ್ಲೆಯಲ್ಲಿ ನಿಂಬೆ ಇಳುವರಿ ಕುಸಿತವಾಗಿದ್ದು ದರ ಹೆಚ್ಚಲು ಕಾರಣವಾಗಿದೆ. ಚಳಿಗಾಲದಲ್ಲಿ 10-12 ಚೀಲ ಸಿಗುವಲ್ಲಿ ಈಗ 2 ಚೀಲ ಸಿಗುತ್ತಿದೆ. ಇನ್ನು ಆಂಧ್ರದಿಂದ ಬರುತ್ತಿದ್ದರೂ ಅದು ಇನ್ನೂ ಬಲಿತಿಲ್ಲ. ಅದು ಸರಿಯಾಗಿ ಮಾರುಕಟ್ಟೆಗೆ ಬರಲು ಶುರುವಾದಾಗ ಬೆಲೆ ಇಳಿಯಬಹುದು ಎನ್ನುತ್ತಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner