No Ads

ಬೀದರ್: ಎಟಿಎಂಗೆ ಹಣ ತುಂಬಿಸುವಾಗ ಸಿನಿಮಾ ಸ್ಟೈಲ್ನಲ್ಲಿ ದರೋಡೆ: ಗುಂಡಿನ ದಾಳಿ ₹ 93ಲಕ್ಷ ಲೂಟಿ

ಜಿಲ್ಲೆ 2025-01-16 13:08:14 378
post

ಬೀದರ್‌: ರಾಜ್ಯವೇ ಬೆಚ್ಚಿ ಬೀಳುವ ಎಟಿಎಂ ದರೋಡೆ ಪ್ರಕರಣ ಬೀದರ್‌ ಜಿಲ್ಲೆಯಲ್ಲಿ ನಡೆದಿದೆ. ಬೀದರ್‌ನಲ್ಲಿ ಗುರುವಾರ ಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಈ ಎಟಿಎಂ ಕಳ್ಳತನ ನಡೆದಿದ್ದು. ಎಸ್​ಬಿಐ ಬ್ಯಾಂಕ್​ ಮತ್ತು ಎಟಿಎಂಗೆ ಹಣ ತುಂಬಿಸುವ ಸಂದರ್ಭದಲ್ಲಿ ಈ ದರೋಡೆ ನಡೆದಿದೆ. ಬ್ಯಾಂಕ್‌ಗೆ ಹಣ ತುಂಬಿಸುವುದಕ್ಕೆ ಸಿಬ್ಬಂದಿ ಬಂದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಿ, ಹಣ ದೋಚಿ ದುರೋಡೆಕೋರರು ಪರಾರಿಯಾಗಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅಲ್ಲದೆ ಈ ಶೂಟೌಟ್‌ ಪ್ರಕರಣದಲ್ಲಿ ಒಬ್ಬ ಬ್ಯಾಂಕ್‌ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಬ್ಯಾಂಕ್‌ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗಿದೆ.

ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೀದರ್​​ ಜಿಲ್ಲೆಯ ಎಸ್‌ಬಿಐ ಮುಖ್ಯ ಕಚೇರಿ‌ ಮುಂಭಾಗದಲ್ಲೇ ಗುಂಡಿನ ದಾಳಿ ನಡೆದಿದೆ. ಇನ್ನು ಇದೇ ಜಾಗದಲ್ಲೇ ಜಿಲ್ಲಾಧಿಕಾರಿಗಳ ಕಚೇರಿಯೂ ಇದೆ. ಎಂದಿನಂತ ಬ್ಯಾಂಕ್​ ಹಾಗೂ ಎಟಿಎಂಗೆ ಹಣ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಪಿಎಸ್‌ಸಿ ವಾಹನ ಸಿಬ್ಬಂದಿ ಹಣವ ತೆಗೆದುಕೊಂಡು ಹೋಗುವಾಗ ಬಂದ ದರೋಡೆಕೋರರು ವಾಹನದ ಸಿಬ್ಬಂದಿ ಮೇಲೆ ಕಾರದ ಪುಡಿಯನ್ನು ಎರಚಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಈ ರೀತಿ ಗುಂಡಿನ ದಾಳಿ ನಡೆಸಿದ ಸಂದರ್ಭದಲ್ಲಿ ಅಂದಾಜು 93 ಲಕ್ಷ ಹಣವನ್ನು ದೋಚಿ, ಪರಾರಿಯಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 


 

No Ads
No Reviews
No Ads

Popular News

No Post Categories
Sidebar Banner
Sidebar Banner