No Ads

‘ಬಿಜೆಪಿ ಬಣ ಬಡಿದಾಟಕ್ಕೆ ತಲೆ ಕೆಡಿಸಿಕೊಳ್ಳಲ್ಲ’ – ಮಾಜಿ ಸಂಸದೆ ಸುಮಲತಾ ಅಂಬರೀಶ್

ಕರ್ನಾಟಕ 2024-12-03 12:10:24 132
post

ಮಂಡ್ಯ, ಡಿ.೦3 : ಭಾರತೀಯ ಜನತಾ ಪಾರ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಗದ್ದಲ ತಾರಕಕ್ಕೇರಿದೆ. ಈ ನಡುವೆ ಮಂಡದಲ್ಲಿ ಬಿಜೆಪಿಯ ಬಣ ಗದ್ದಲದ ಬಗ್ಗೆ ಪ್ರತಿಕ್ರಿಯಿಸಲು ರೆಬಲ್ ಲೇಡಿ ವಿರೋಧ ವ್ಯಕ್ತಪಡಿಸಿದ್ದಾರೆ.  ಪಕ್ಷದಲ್ಲಿನ ಗದ್ದಲದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ, ಅದನ್ನ ಸರಿ ಪಡಿಸಲು ವರಿಷ್ಠರಿದ್ದಾರೆ. ನಾನು ಬಿಜೆಪಿಯಲ್ಲೇ ಇದ್ದರು ಸಮಸ್ಯೆಯನ್ನ ಸರಿಪಡಿಸುವವರು ಸರಿ ಮಾಡ್ತಾರೆ. ನಾನು ಇದರ ಬಗ್ಗೆ ಇನ್ವಾಲ್ವ್ ಆಗೋದು ಸರಿಯಲ್ಲ. ಚಂದ್ರಶೇಖರ ಸ್ವಾಮಿ ವಿರುದ್ದ ಎಫ್‌ಐಆರ್  ಆಗಿರೋದು ಬೇಸರದ ಸಂಗತಿ. ಎಲ್ಲಾ ವಿಚಾರದಲ್ಲೂ ರಾಜಕೀಯ ಸರಿಯಲ್ಲ. ಮತ್ತೊಂದು ಹಂತಕ್ಕೆ ರಾಜಕೀಯ ಹೋಗ್ತಿರೋದನ್ನ ನೋಡಿದ್ರೆ ಭಯ ಆಗುತ್ತ. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ‍್ಯ ಇಲ್ವಾ ಅನ್ನೊ ಭಯ ಆಗ್ತಿದೆ. ಖುದ್ದಾಗಿ ಸ್ವಾಮಿಜಿಯೇ ಅವರ ಮಾತು ಸರಿ ಇಲ್ಲಾ ಅಂದಾಗ ಅದನ್ನ ಮುಂದುವರೆಸೋದು ಸರಿಯಲ್ಲಾ ಅಂತಾ ಮಂಡ್ಯದಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಕಳವಳ ವ್ಯಕ್ತಪಡಿಸಿದ್ದಾರೆ. 

No Ads
No Reviews
No Ads

Popular News

No Post Categories
Sidebar Banner
Sidebar Banner