ಕಾರ್ಕಳ, ಡಿ.13 : ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನೋರ್ವ ಬಾಲಕನಿಗೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾನೆಚಿದು ಗಂಭೀರ ಆರೋಪಿಸಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ಘಟನೆ ನಡೆದಿದ್ದು, ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿವೆ. ತ್ವೈಬಾ ಗಾರ್ಡನ್ ಮುಖ್ಯಸ್ಥ ಸಅದಿ ಕಿಲ್ಲೂರು ಅವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಮೈ ಮೇಲೆ ಬರೆ ಬರುವ ರೀತಿಯಲ್ಲಿ ಏಟು ತಿಂದಿರುವ ಬಾಲಕನ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಟ್ಟು ಬಾಲಕನ ಪೋಷಕರು ಅಳಲು ತೋಡಿಕೊಂಡಿದ್ರು. ಮಗನ ಸ್ಥಿತಿ ಕಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ರು. ಘಟನೆ ಹಿನ್ನೆಲೆ ತೀವ್ರ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಹಲ್ಲೆ ನಡೆಸಿದ ಸಂಸ್ಥೆಯ ಮುಖ್ಯಸ್ಥನನ್ನ ವಜಾಗೊಳಿಸಲಾಗಿದೆ. ಆರೋಪ ಹೊತ್ತ ಸಅದಿ ಕಿಲ್ಲೂರು ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಹಿಗ್ಗಾ ಮುಗ್ಗಾ ಹಲ್ಲೆ..!
No Ads
Log in to write reviews