ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇದರ ಜೊತೆಗೆ 4 ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಉಪಚುನಾವಣೆ ಕೂಡ ಘೋಷಣೆಯಾಗಿದೆ. ಎಪ್ರಿಲ್ 19 ರಿಂದ ಜೂನ್ 1 ರವರೆಗೆ ದೇಶದಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಇದರ ನಡುವೆ ನೀರಿನ ಸಮಸ್ಯೆಯೂ ಭಾರತದಲ್ಲಿ ಐಪಿಎಲ್ ಆಯೋಜನೆಗೆ ಹಿನ್ನೆಡೆಯಾಗುತ್ತಿದೆ. ಹೀಗಾಗಿ 2024ರ ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ. ಈಗಾಗಲೇ ಬಿಸಿಸಿಐ ಅಧಿಕಾರಿಗಳ ತಂಡ ದುಬೈನಲ್ಲಿ ಬೀಡು ಬಿಟ್ಟಿದ್ದು,ಐಪಿಎಲ್ ಆಯೋಜನೆ ಕುರಿತು ಚರ್ಚೆ ನಡೆಸುತ್ತಿದೆ. 18ನೇ ಲೋಕಸಭಾ ಚುನಾವಣೆ ಮತದಾನ ಎಪ್ರಿಲ್ 19 ರಂದು ಆರಂಭಗೊಳ್ಳುತ್ತಿದೆ. ಎಪ್ರಿಲ್ 26ಕ್ಕೆ ಏರಡನೇ ಹಂತ, ಮೇ 7ಕ್ಕೆ ಮೂರನೇ ಹಂತ, ಮೇ 13ಕ್ಕೆ ನಾಲ್ಕನೇ ಹಂತ, ಮೇ 20ಕ್ಕೆ 5ನೇ ಹಂತ, ಮೇ 25ಕ್ಕೆ 6ನೇ ಹಂತ ಹಾಗೂ ಜೂನ್ 1 ರಂದು ಕೊನೆಯ ಹಾಗೂ 7ನೇ ಹಂತ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಘೋಷಣೆಯಾಗಲಿದೆ.
ಚುನಾವಣೆ ಘೋಷಣೆ ಬೆನ್ನಲ್ಲೇ ಐಪಿಎಲ್ ದುಬೈಗೆ ಸ್ಥಳಾಂತರಿಸಲು ಬಿಸಿಸಿಐ ಪ್ಲಾನ್!
No Ads
Log in to write reviews